contact@ijirct.org      

 

Publication Number

2501021

 

Page Numbers

1-5

Paper Details

ವಚನ ಪರಂಪರೆ ಮತ್ತು ಆಧುನಿಕ ವಚನ ಸಾಹಿತ್ಯ ಬೆಸೆಯುವ ಮಹಾನುಭಾವಿಗಳ ಅಮೃತ ವಾಣಿಗಳು

Authors

ಡಾ. ಹೆಚ್. ಎಸ್. ಪ್ರೇಮಲತ

Abstract

ಜೀವನ ಸಿದ್ಧಾಂತವನ್ನು ಪ್ರತಿಪಾದಿಸುವ ವಚನ ಸಾಹಿತ್ಯ ಲೌಕಿಕ ಮತ್ತು ಪಾರಮಾರ್ಥಿಕಗಳನ್ನು ಬೆಸೆಯುವಮಹಾನುಭಾವಿಗಳ ಅಮೃತ ವಾಣಿಗಳಾಗಿವೆ. ಈ ಬಗೆಯ ಸಾಹಿತ್ಯ ಪ್ರಕಾರವು ಹನ್ನೆರಡನೆಯ ಶತಮಾನದಲ್ಲಿ ವಿಶೇಷ ¥ಭಾವªನ್ನು ಬೀರಿ ಸುವರ್ಣ ಯುಗವನ್ನು ನಿರ್ಮಿಸಿತು. ಸ್ವಾನುಭವವೇ ªಚನಗಳ ಅಂತರAಗವಾಗಿದ್ದು ಅದು ಲೌಕಿಕ ಮತ್ತು ಅಲೌಕಿಕಗಳನ್ನು ಒಂದು ಗೂಡಿಸುವ ಸೋಪಾನ ವಾಗಿದೆ. ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಕಕ್ರಾಂತಿಗೆಕಾರಣವಾದ ವಚನಗಳಿಗೆ ಜಾತಿ, ಜನಾಂಗದ ಕಟ್ಟು ನಿಟ್ಟಿಲ್ಲ. ಸುಮಾರು 800 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ವಚನ ಸಾಹಿತ್ಯ ತನ್ನ ಗಟ್ಟಿತನದಿಂದ ಇಂದಿಗೂ ಸಜೀವ ಸಾಹಿv್ಯವೆನಿಸಿದೆ. ಕನ್ನಡ ಸಾಹಿತ್ಯಕ್ಕೆ ವಿಶ್ವ ಸಾಹಿತ್ಯದಘನತೆ ಗೌರವಗಳನ್ನು ತಂದುಕೊಟ್ಟಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆ. “ಈ ವZನಗಳು ಅಂಕಿತವನ್ನೊಳಗೊAಡ ಶರಣರ ಉತ್ಕಟ ಅನುಭಾವ ಗೀತಗಳು. ಅವು ಭಾವಗೀತೆಯ ಭಾವ ತೀವ್ರತೆಯನ್ನೂ, ವಸ್ತುವಿನ ಏಕಮುಖತೆಯನ್ನೂ, ವ್ಯಕ್ತಿನಿಷ್ಠೆಯ ಹೆಚ್ಚಳವನ್ನೂ ನಿಚ್ಚಳವಾಗಿ ಒಳಗೊಂಡಿವೆ.”. ಅವುಗಳಲ್ಲಿ ಕಾವ್ಯಧರ್ಮ ಮತ್ತು ಮಾನªಧರ್ಮಗಳ ತಿರುಳು ಸಮರಸಗೊಂಡು ಸುಂದರವಾದ ಭಾವಾಭಿವ್ಯಕ್ತಿಯನ್ನು ಪಡೆದಿವೆ. ದೇಶ ಭಾಷೆಯ ಪರಿಮಿತ ಮೇರೆಯಿಲ್ಲ. ಕಾಲದ ಪರಿದಿಗೂ ಅವು ಒಳಪಡುವುದಿಲ್ಲ. ಮಾ£ಸ್ಸಿನ ಸಂಕುಚಿತ ಭಾವನೆಗಳನ್ನು ತೊಲಗಿಸಿ, ಭಕ್ತಿ, ಸತ್ಯ, ನಿಷ್ಠೆ, ಸಮತೆ ಸೈರಣೆ ಮೊದಲಾದ ಉದಾತ್ತ ಭಾವನೆಗಳನ್ನು ಉದ್ದೀಪನಗೊಳಿಸುವ ವಚನಗಳು ಸತ್ಯಸೌಂದರ್ಯದ ಸಾಕ್ಷಾತ್ಕಾರವನ್ನು ಮೂಡಿಸುತ್ತವೆ. ಇಂತಹ ಮಹತ್ಕಾರ್ಯವನ್ನು ಸಾಧಿಸಿದ ವಚನ ಸಂಪ್ರದಾಯ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿದೆ. ವಚನ ಸಾಹಿತ್ಯ ಪರಂಪರೆ ದಾಸಿಮಯ್ಯ ಯುಗ ವಚನ ಸೃಷ್ಟಿ ಸುಮಾರು ಹನ್ನೊಂದನೆಯ ಶತಮಾನದಲ್ಲಿ ದಾಸಿಮಯ್ಯನಿಂದ ಆರಂಭಗೊAಡು ಬಸವಾದಿಮಹಾನುಭಾವಿಗಳ ಕಾಲಕ್ಕೆ ಮಹೋನ್ನತಿಯನ್ನು ಪಡೆದುಒಂದು ಸಜೀವ ಸತ್ಪರಂಪರೆಯಾಗಿ ಇಂದಿಗೂ ಮುಂದುವರೆದಿದೆ. ಹನ್ನೆರಡನೆಯ ಶತಮಾನದಬ¸ ವಾದಿ ಶರಣರವಚನ ರಚನೆಗೆಅವರಿಗಿಂತಲೂ ಪೂರ್ವದಲ್ಲಿದ್ದ ಅನೇಕ ಶರಣರ ವಚನಗಳೇ ಅಡಿಪಾಯ. ಆದ್ಯರ ಬಹುಪಾಲು ವಚನಗಳು ಲಭ್ಯವಾಗಿಲ್ಲ. “ಪ್ರಥಮ ವಚನಕಾರನೆಂದು ಬಹುತೇಕ ವಿದ್ವಾಂಸರಿAದಅAಗೀಕರಿಸಲ್ಪಟ್ಟಿರುವಜೇಡರ ದಾಸಿಮಯ್ಯನಲ್ಲಿ ‘ವಚನ’ ಎಂಬ ಪದವೇ ದೊರೆಯುವುದಿಲ್ಲ. ಆತ ವಚನಗಳನ್ನು ಕುರಿತು ಹೇಳುವಾಗ ‘ಮೃಡಭಕ್ತರ ನುಡಿಗಡಣ’, ‘ಶರಣರ ಸೂಳ್ನುಡಿ’ ಎಂದೇ ಹೇಳುತ್ತಾನೆ” ಭಕಿ ್ತ ಪ್ರಧಾನವಾದಆತ್ಮ ಸ್ತುತಿಯನ್ನು ಅಭಿವ್ಯಕ್ತಿಸುವಅಧ್ಯಾತ್ಮಿಕ ಗದ್ಯಗೀತೆಗಳಂತಿರುವ ವಚನಗಳನ್ನು ಸೂಳ್ನುಡಿಗಳೆಂದು ಕರೆಯುತ್ತಿದ್ದರು ಎಂಬುದು ದಾಸಿಮಯ್ಯನ ವಚನದಿಂದ ತಿಳಿದುಬರುತ್ತದೆ.

Keywords

-

 

. . .

Citation

ವಚನ ಪರಂಪರೆ ಮತ್ತು ಆಧುನಿಕ ವಚನ ಸಾಹಿತ್ಯ ಬೆಸೆಯುವ ಮಹಾನುಭಾವಿಗಳ ಅಮೃತ ವಾಣಿಗಳು. ಡಾ. ಹೆಚ್. ಎಸ್. ಪ್ರೇಮಲತ. 2016. IJIRCT, Volume 2, Issue 4. Pages 1-5. https://www.ijirct.org/viewPaper.php?paperId=2501021

Download/View Paper

 

Download/View Count

15

 

Share This Article